ಸಿದ್ದು ಸಾಮ್ರಾಜ್ಯದ ಪತನದ ನಂತರ(ಸಿದ್ದು ಕನಸಿಗೆ ಗುದ್ದು)

ಹಾ ಹೌದು ಚುನಾವಣಾ ಪೂರ್ವದಲ್ಲಿ  ಕರ್ನಾಟಕವೆಂಬ ಸಾಮ್ರಾಜ್ಯದೊಳಗೆ ಕೋಟೆ ಕಟ್ಟಿ ಮೆರೆಯುತ್ತಿದ್ದ ಸಿದ್ದರಾಮಯ್ಯ ಇಂದು ಮೊದಲಿನ ಹುರುಪು ಕಳೆದುಕೊಂಡು  ಕಾಂಗ್ರೆಸ್ ನಲ್ಲಿ  ಮೂಲೆಗುಂಪಾಗುವ ಎಲ್ಲ ಲಕ್ಷಣಗಳು ಗೋಚರವಾಗುತ್ತಿವೆ.  ಇಡೀ ಭಾರತದಲ್ಲೇ ಮೋದಿಯನ್ನು ಎದುರಿಸಲು ಸಮರ್ಥ ನಾಯಕ ಇಲ್ಲದ ಸಮಯದಲ್ಲಿ ಸುನಾಮಿಯಂತೆ ಎದ್ದು ಬಂದು ಮೋದಿಯನ್ನು ಕಟ್ಟಿಹಾಕುವಲ್ಲಿ ಸಫಲರಾದ ಕಾರಣದಿಂದಲೇ ಬಿಜೆಪಿ ಗೆ ಸ್ಪಷ್ಟ ಬಹುಮತ ಪಡೆಯುವಲ್ಲಿ ವಿಫಲವಾಯಿತು ಇಂದು ಕಾಂಗ್ರೆಸ್ jds ನೊಂದಿಗೆ ಸಮ್ಮಿಶ್ರ ಸರ್ಕಾರ ಮಾಡುತ್ತಿದೆ ಎಂದರೆ ಅದಕ್ಕೆ ಸಿದ್ದರಾಮಯ್ಯ ಗೆಲ್ಲಿಸಿಕೊಟ್ಟ  78 ಸೀಟ್ ಗಳೇ ಕಾರಣ ಅವರ ಈ ಕೊಡುಗೆಯೇ ಕಾರಣ.ಆದರೆ ಇಂದು ಸೋಲಿನ ಸಂಪೂರ್ಣ ಹೊರೆಯನ್ನು ಸಿದ್ದುವಿನ ತಲೆಗೆ ಕಟ್ಟಿ ಸಿದ್ದರಾಮಯ್ಯನವರ ಆ ಮೊದಲಿನ ಹುರುಪು ಕಳೆಗುಂದಲು ಕಾರಣವೆನ್ನಲಾಗಿದೆ .ಚುನಾವಣಾ ಪೂರ್ವದಲ್ಲಿ ಮುಂದಿನ ಮುಖ್ಯಮಂತ್ರಿ ನಾನೇ ಎಂದು ಹೇಳಿ ಕೊಂಡು ಓಡಾಡುತಿದ್ದ ಸಿದ್ದರಾಮಯ್ಯ ನವರು ಒಲ್ಲದ ಮನಸ್ಸಿನಲ್ಲಿಯೇ ಹೈಕಮಾಂಡ್ ಒತ್ತಡದಿಂದಾಗಿ ಜೆಡಿಎಸ್  ನೊಂದಿಗೆ ಸೇರಿ ಸರ್ಕಾರ ರಚಿಸುವಲ್ಲಿಯೂ ಪಾತ್ರವಹಿಸಿದರು. ಮಾಜಿ ಸ್ಪೀಕರ್ ಕೋಳಿವಾಡ ರವರು ಸಿದ್ದರಾಮಯ್ಯನ ಮೇಲೆ ಸೋಲಿನ ಹೊಣೆ ಹೊರಿಸಿ ಟೀಕಿಸಿದರು.ವರುಣದಲ್ಲಿ ಜಿ ಟಿ ದೇವೇಗೌಡರ ನಡುವಿನ ಬಾರಿ ಅಂತರದ ಸ್ವ ಕ್ಷೇತ್ರದಲ್ಲಿನ ಸೋಲು ಅವರನ್ನು ಮತ್ತೆ ರಾಜಕೀಯದಲ್ಲಿ ಎದ್ದು ಬರದಷ್ಟು ಕುಗ್ಗಿಸಿದೆ ಬಾದಾಮಿಯು ಕೈ ತಪ್ಪುವುದರಲ್ಲಿ ಇದ್ದರು ಅಲ್ಪ ಅಂತರದಲ್ಲಿ ಗೆಲುವು ಸಾಧಿಸಿ ರಾಜಕೀಯದಲ್ಲಿ ಉಸಿರು ಬಿಡುವಂತೆ ಮಾಡಿದೆ.ಇಂದು ಪ್ರಸ್ತಕ ವಿದ್ಯಮಾನಗಳನ್ನು ಗಮನಿಸಿದಾಗ ಸಿದ್ದರಾಮಯ್ಯನವರ ಯುಗಾಂತ್ಯ ಕಾಂಗ್ರೆಸ್ ನಲ್ಲಿ ಶುರುವಾಗಿದ್ದು ಡಿಕೆ ಶಿವಕುಮಾರ್ ಮತ್ತು ಪರಮೇಶ್ವರ್ ಯುಗ ಶುರುವಾದಂತೆ ಕಂಡುಬರುತ್ತಿದೆ. ಸಿದ್ದರಾಮಯ್ಯ ಸೋಲಿನಲ್ಲಿ ಈ ಇಬ್ಬರು ನಾಯಕರು ರಾಜ್ಯದಲ್ಲಿ ಕಾಂಗ್ರೆಸ್ ನ ಅಗ್ರಗಣ್ಯ ನಾಯಕರಾಗಿ ಬೆಳೆದಿರುವುದಂತೂ ಸುಳ್ಳಲ್ಲ. ಮೊನ್ನೆ ಭಾರತದ ಪ್ರಾದೇಶಿಕ ಪಕ್ಷಗಳ ಎಲ್ಲ ನಾಯಕರು ಕುಮಾರಸ್ವಾಮಿಯವರ ಪ್ರಮಾಣ ವಚನ ಸ್ವೀಕಾರ ಸಂದರ್ಭದಲ್ಲಿ ಕೈ ಹಿಡಿದು ಸಾಗಿದರು ಅವರ ಗುಂಪಿನಲ್ಲಿ ಸಿದ್ದರಾಮಯ್ಯ ಇಲ್ಲದಿರುವುದು ಸಿದ್ದರಾಮಯ್ಯ ಅಭಿಮಾನಿಗಳಲ್ಲಿ ಬೇಸರವಾಗಿದೆ.ಸಿದ್ದರಾಮಯ್ಯ ನವರು ದೇವೇಗೌಡರ ಮತ್ತು ಕುಮಾರಸ್ವಾಮಿಯವರ ಮುಂದೆ ಸಂಧಾನ ಸಭೆಯಲ್ಲಿ ಕೈ ಕಟ್ಟಿ ನಿರಾಶದಾಯಕರಾಗಿ ಕುತಿದ್ದು ಅಭಿಮಾನಿಗಳಲ್ಲಿ ಹತಾಶೆ ಮೂಡಿಸಿದೆ. ಮುಂದಿನ ಪ್ರಧಾನಿ ಅಭ್ಯರ್ಥಿಯೆಂದೇ ಮಾಧ್ಯಮಗಳಲ್ಲಿ ಬಿಂಬಿತವಾಗುತ್ತಿದ್ದಂತ ಸಿದ್ದರಾಮಯ್ಯ ನವರನ್ನು ಇಂದು ಸೋಲಿನ ಹೊಣೆ ಹೊರಿಸಿ ಕಡೆಗಣಿಸಲಾಗಿದೆ ಇದೆ ವಿಷಯವನ್ನು ಬಿಜೆಪಿ ರಾಜ್ಯಾಧ್ಯಕ್ಷ ವಿರೋಧಪಕ್ಷದ ನಾಯಕರು ಆಗಿರುವ ಯಡಿಯೂರಪ್ಪ ನವರು ವಿಧಾನಸೌಧದಲ್ಲಿ ನಡೆದ ಅಧಿವೇಶನದಲ್ಲಿ ಪ್ರಸ್ತಾಪಿಸಿದರು. ನಿನ್ನೆ ಚಿಕ್ಕಮಗಳೂರು ನಲ್ಲಿ ಶೋಭಾ ಕರಂದ್ಲಾಜೆ ರವರು ಕಾಂಗ್ರೆಸ್ ಸಿದ್ದರಾಮಯ್ಯ ನವರನ್ನು use and throw ಮಾಡಿದೆ ಎಂದು ಟೀಕಿಸಿದರು ಮತ್ತು ಕಾಂಗ್ರೇಸ್ ನ ಮನೋಬಾವದ ಬಗ್ಗೆ ಪ್ರಹಾರ ನಡೆಸಿದರು. ಈಗ ಸದ್ಯಕ್ಕೆ ಅಲ್ಲಿ ಇಲ್ಲಿ ಸಿದ್ದರಾಮಯ್ಯನವ್ರು ದೆಹಲಿ ಕಡೆ ರಾಜಾಕೀಯವಾಗಿ ಮುಖಮಾಡುವರು ಎಂಬ ಸುದ್ದಿ ಹರಿದಾಡುತ್ತಿದೆ.ಆದರೆ ಈ ಒಂದು ಸೋಲು ಸಿದ್ದರಾಮಯ್ಯ ನವರನ್ನು ಪೂರ್ಣವಾಗಿ ಮುಗಿಸಿದಂತೂ ಸುಳ್ಳಲ್ಲ.. ಚಾಣಕ್ಯರ  ಬೇಟೆಗೆ ಬಲಿಯಾಯಿತು ಸಿಎಂ ಸಿದ್ದರಾಮಯ್ಯ ನವರ ಮತ್ತೆ ಮುಖ್ಯಮಂತ್ರಿ ಯಾಗಬೇಕೇನುವ ರಾಜಕೀಯ ಹಂಬಲ.

report by:

A Right wing


Comments