ಕಾಂಗ್ರೆಸ್ ನ ಹರಕೆಯ ಕುರಿಯಾದರೆ ಕುಮಾರಣ್ಣ????

ಬಿಜೆಪಿ ಜೊತೆಗಿನ 20 20 ಸರಕಾರದಲ್ಲಿ 20 ತಿಂಗಳು ನೀಡಿದ ಉತ್ತಮ ಆಡಳಿತ ಮತ್ತು ಜನತಾ ದರ್ಶನ , ಗ್ರಾಮವಾಸ್ತವ್ಯ ದಂತಹ ಉತ್ತಮ ಜನಪರ ಕಾರ್ಯಕ್ರಮಗಳು ಮತ್ತು ಅಪ್ಪನ ಬೆಂಬಲದೊಂದಿಗೆ ರಾಜ್ಯದಲ್ಲಿ ಅತಿ ವೇಗವಾಗಿ ಬೆಳೆದ ನಾಯಕ ಕುಮಾರಸ್ವಾಮಿ. ಕರ್ನಾಟಕಕದಲ್ಲಿ ಜೆಡಿಎಸ್ ಗೆ ಬೆಂಬಲವಿಲ್ಲದಿದ್ದರು ಕುಮಾರಸ್ವಾಮಿ ಗೆ ಬೆಂಬಲ ನೀಡುವ ಸಾಕಷ್ಟು ಜನರಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಮಿಂಚಿನ ವೇಗದಂತೆ ಹಗರಣಗಳನ್ನು ಬಯಲಿಗೆ ತಂದು ಸರ್ಕಾರವನ್ನು ಅಸ್ಥಿರಗೊಳಿಸಿದ ಕೀರ್ತಿ ಕುಮಾರಣ್ಣ ನಿಗೆ ಸಲಹುತ್ತದೆ.ಅಂತಹ ಒಬ್ಬ ನಾಯಕ ಇಂದು ಕಾಂಗ್ರೆಸ್ ನ ಹರಕೆಯ ಕುರಿಯಾದಾರೆ? ಎಂಬ ಸಂಶಯ ಮೂಡಿಬರುತ್ತಿದೆ.  ಹೌದು   ಇದಕೆಲ್ಲ ಕಾರಣ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಂದ ಅತಂತ್ರ ಫಲಿತಾಂಶ , ಚುನಾವಣೆಯಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತಾದರು ಸ್ಪಷ್ಟ ಬಹುಮತ ಪಡೆಯುವಲ್ಲಿ ವಿಫಲವಾಯಿತು. ದೇಶದಲ್ಲಿ ಒಂದೊಂದೇ ರಾಜ್ಯಗಳನ್ನ ಕಳೆದು ಕೊಂಡು ದೇಣಿಗೆಯು ಇಲ್ಲದೆ ದೇಶದಲ್ಲಿ ಬಡ ಪಕ್ಷವಾಗುತ್ತಿರುವ ಕಾಂಗ್ರೆಸ್ ಗೆ ಕರ್ನಾಟಕವನ್ನು ಬಿಜೆಪಿ ಗೆ ಬಿಟ್ಟುಕೊಡದೆ ತಾವೇ ಉಳಿಸಿಕೊಳ್ಳಬೇಕಾದ ಪರಿಸ್ಥಿತಿ . ಬಹುಶಃ ಕಾಂಗ್ರೆಸ್ ನವರಿಗೆ ಈ ಭಯ ಕಾಡಿರಬಹುದು ಕುಮಾರಸ್ವಾಮಿ ಯವರು ಬಿಜೆಪಿ ಯನ್ನುಬಿಬೆಂಬಲಿಸಿದರೆ ಅತಿ ದೊಡ್ಡ ಪಕ್ಷವೆಂದು ನಮ್ಮ ಅಧಿಕಾರ ಕೈ ತಪ್ಪಿಹೋಗಿಬಿಡುತ್ತದೆ ಎಂದು ಚುನಾವಣಾ ಫಲಿತಾಂಶ ಬರುವ ಮುನ್ನವೇ ಜೆಡಿಎಸ್ ಗೆ ಬೇಷರತ್ ಬೆಂಬಲ ನೀಡಿದರು.ಬೆಷರತ್ ಎಂದರೆ ಜೆಡಿಎಸ್ ನವರೆ ಸರ್ಕಾರ ನಡೆಸಲಿ ನಾವು ಸರ್ಕಾರದಲ್ಲಿ ಯಾವುದೇ ಫಲಾಪೇಕ್ಷೇ ಇಲ್ಲದೆ ಒಂದು  ಅಂಗವಾಗಿ ಇರುತ್ತೇವೆ ಎಂದು.. ಜೆಡಿಎಸ್ ಗೆ ಮುಖ್ಯಮಂತ್ರಿ ಸೀಟ್ ಎಂಬ ಒಂದು biscuits  ಉದುರಿಸಿ ಜೆಡಿಎಸ್ ಬಿಜೆಪಿ ಯ ಕಡೆ ಹೋಗುವುದನ್ನು ಸಂಪೂರ್ಣವಾಗಿ ತಡೆದರು.ಈಗ ಕುಮಾರಸ್ವಾಮಿ ಗೆ  ಡೆಲ್ಲಿ ಯಲ್ಲಿ ಹೈಕಮಾಂಡ್ ನಿರ್ಮಾಣಮಾಡಿ ಕುಮಾರಸ್ವಾಮಿಯವರು ಕೈ ಕಟ್ಟಿ ನಿಲ್ಲುವಂತೆ ಮಾಡಿ ತಂದು ಕೂರಿಸಿದ್ದಾರೆ.ಮುಖ್ಯಮಂತ್ರಿ ಸ್ಥಾನವೊಂದನ್ನ ಜೆಡಿಸ್ ಗೆ ಬಿಟ್ಟು ಉಳಿದೆಲ್ಲ ಪ್ರಮುಖ ಖಾತೆಗಳು ತಮ್ಮಲ್ಲೆ ಬೇಕು ಎಂದು ಖ್ಯಾತೆ ತೆಗಿದಿವೆ.ಹಣಕಾಸಿಗಾಗಿ ಪರಂ ಮತ್ತು ಕುಮಾರ ನಡುವೆ ಜಟಾಪಠಿ ಯಾದರೆ ಇಂಧನ ಕ್ಕಾಗಿ ರೇವಣ್ಣ ಶಿವಕುಮಾರ್ ನಡುವೆ ಯುದ್ಧವೇ ನಡೆಯುತ್ತಿದೆ ಇದೆಲ್ಲದರ ಮದ್ಯೆ ಸಾಲಮನ್ನ ಕುಮಾರಸ್ವಾಮಿ ಯವರ ಆಡಳಿತದ ಮೊದಲ ದಿನದಿಂದಲೇ ಬೇತಾಳದಂತೆ ಕಾಡುತ್ತಿದೆ. ಇತ್ತ ಬಿಜೆಪಿ ಯ ಜೊತೆ ಬರಲು ಆಗದೆ ಅತ್ತ ಕಾಂಗ್ರೆಸ್ ಬಿಡಲು ಆಗದೆ ಇತ್ತ ವಚನಭ್ರಷ್ಟ ಎಂಬ ಪದ ಮತ್ತೆ ಉಳಿಯುತ್ತದೆ ಎಂಬ ಭಯದಲ್ಲೋ ಕುಮಾರ ಸ್ವಾಮಿಯವರ ಪಾಡು ಇಂದು ತ್ರಿಶಂಕು ಸ್ಥಿತಿಯಲ್ಲಿ ಆಗಿಬಿಟ್ಟಿದೆ.ಆದ್ದರಿಂದಲೇ ಕೆಲವೊಮ್ಮೆ ರಾಜೀನಾಮೆಯ ಮಾತುಗಳನ್ನು ಹೇಳಿಬಿಟ್ಟಿದ್ದಾರೆ.

A report by :

A RIGHT WING KANNADA


Comments