ನಾಳಿನ ಬಂದ್ ಗೆ ವಾಟಾಳ್ ಹೇಳಿದ್ದೇನು

ಬಂದ್ ಬಂದ್ ಬಂದ್ ಅಂದರೆ ನಮಗೆ ನೆನಪಾಗೋದು ಕಪ್ಪು ಟೋಪಿ ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಕಿ ವಿಭಿನ್ನ ಪ್ರತಿಭಟನೆಗಳ ಮೂಲಕ ಬೀದಿಗೆ ಇಳಿದುಬಿಡುವ ವಾಟಾಳ್ ನಾಗರಾಜ್. ಸಾಕಷ್ಟು ಕನ್ನಡ ಪರ ಹೋರಾಟ ರೈತ ಪರ ಹೋರಾಟ ಮಾಡಿಕೊಂಡು ಬಂದಿದ್ದಂತಹ ಇವರು.. ಕಳೆದ ಐದು ವರ್ಷಗಳಿಂದ ತಮ್ಮ ಮೇಲಿದ್ದ ಗೌರವ ಮತ್ತು ಅವರ ಪ್ರತಿಭಟನೆಗಳಿಗೆ ಜನ ನೀಡುತ್ತಿದ್ದ ಬೆಂಬಲ ಕಡಿಮೆಯಾಗುತ್ತಿದೆ. ಕಾರಣ ಇಷ್ಟೇ ಅವರು ಕೇವಲ ಕೆಲವೊಂದು ಪಕ್ಷದ ಪರವಾಗಿ ಕೆಲಸ ಮಾಡುವವರಾಗಿದ್ದರೆ ಎಂದು ಜನಸಾಮಾನ್ಯರ ಅಭಿಪ್ರಾಯವಾಗಿ ಹೊರಹೊಮ್ಮುತ್ತಿದೆ.ಈಗ ಅವರ ಮಾತಿಗೆ ಕೆಲವು ಹಿತೈಷಿಗಳ ಸಹಕಾರ ಬಿಟ್ಟರೆ ಬೇರೆ ಎಲ್ಲರಿಂದಲೂ ನಕಾರಾತ್ಮಕ ಪ್ರತಿಕ್ರಿಯೆಗಳು ಹೊರಹೊಮ್ಮುತ್ತಿವೆ.. ವಾಟಾಳ್ ಅಂದಿನಿಂದಲೂ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ನಡೆಸಿಕೊಂಡು ಬಂದರಾದರು ರಾಜ್ಯಸರ್ಕಾರದ ವಿರುದ್ಧ ತುಟಿಪಿಟಿಕ್ ಅನ್ನದೆ ಇರುವುದು ಜನರ ಕೆಂಗಣ್ಣಿಗೆ ಗುರಿಯಾಗಿದ್ದಂತೂ ಸುಳ್ಳಲ್ಲ.. ಇದಕ್ಕೆಲ್ಲ ಕಾರಣ ಕನ್ನಡ ರಾಜ್ಯೋತ್ಸವ ಆಚರಣೆ ಹೆಸರಿನಲ್ಲಿ ಸಿದ್ದರಾಮಯ್ಯ ಸರ್ಕಾರದಿಂದ ಪಡೆದ ದೇಣಿಗೆ ಎಂಬ ಸುದ್ದಿಯು ಹರಿದಾಡುತಿತ್ತು..  ಇಷ್ಟೆಲ್ಲ ರೈತ ಪರ ಹೋರಾಟ ನಡೆಸಿಕೊಂಡು ಬಂದ ವಾಟಾಳ್ ಇಂದೇಕೋ ಯಾರದೋ ಒತ್ತಡಕ್ಕೆ ಸಿಲುಕಿ ವಾಟಾಳ್ ರನ್ನು ಗೊಂಬೆಯಂತೆ ಆಡಿಸುತ್ತಿರುವಂತೆ  ಭಾಸವಾಗುತ್ತಿದೆ. ಇದಕ್ಕೆಲ್ಲ ಕಾರಣ ಮೊನ್ನೆ 23 ರಂದು ಯಡಿಯೂರಪ್ಪನವರು ಕರ್ನಾಟಕದ ರೈತರ ಪರವಾಗಿ ಸರ್ಕಾರ ಪ್ರಣಾಳಿಕೆಯಲ್ಲಿ ಹೇಳಿರುವಂತೆ ಸಾಲಮನ್ನಾ ಮಾಡಬೇಕು ಎಂದು ಮಾಡದೆ ಇದ್ದಲ್ಲಿ ರಾಜ್ಯದಲ್ಲಿ ಪ್ರತಿಭಟನೆ ಮತ್ತು ಬಂದ್ ಬಿಸಿ ಎದುರಿಸಬೇಕಾಗುತ್ತದೆ ಎಂದು ಬಂದ್ ಕರೆ ಕೊಟ್ಟು ಬಿಟ್ಟಿದ್ದರು.. ಆದರೆ ಇವತ್ತು ಯಾರು ರಾಜ್ಯದಪರವೋ ಯಾರು ರೈತರ ಪರವೋ ಯಾರು ನಾಡು ನುಡಿ ರಕ್ಷಣೆಗೆ ನಿಂತವರು ಎಂದುಕೊಂಡಿದ್ದರೋ ವಾಟಾಳ್ ರವರು ಇಂದು ನಾನು ಪ್ರತಿಭಟನೆಗೆ ಬೆಂಬಲಿಸುವುದಿಲ್ಲ ಪ್ರತಿಭಟನೆ ಮತ್ತು ಬಂದ್ ಗೆ ನಮ್ಮ ಸಹಕಾರವಿಲ್ಲವೆಂದು ಹೇಳಿಬಿಟ್ಟರು  ಆದ್ದರಿಂದ ವಾಟಳ್ ರವರು ಕನ್ನಡ ಪರ ಹೋರಾಟ ರೈತರ ಪರ ಕಾಳಜಿ ಬರೀ ಕಾಂಗ್ರೆಸ್ ಸರಕಾರದ ಪರವಾಗಿ ಹೊರತು ಕಾಂಗ್ರೆಸ್ jds ಸರಕಾರದ ವಿರುದ್ದವಾಗಿ ಇಲ್ಲ ಎಂದು ಅವರ ದ್ವಿಮುಖ ನೀತಿ ಇಂದು ಬಟಬಯಲಾಗಿದೆ.

report by:

A right wing

Comments