ಈ ನಾಡಿನ ಬುದ್ದಿಜೀವಿಗಳು, ಒಬ್ಬ ಕೇಂದ್ರ ಸಚಿವನಾಗಿ ಅನಂತ್ ಕುಮಾರ್ ಹೆಗಡೆ ಹೇಳಿದ್ದನ್ನು ವಿರೋಧಿಸಲೇ ಬೇಕು.
ಈ ಹಿಂದೆ ಮೋದಿ ಸರ್ಕಾರ ರಚನೆಯಾದಾಗ ಅಸಹಿಷ್ಣುತೆ ಉಂಟಾಗಿತ್ತು, ಆಗ ಅವಾರ್ಡ್ ವಾಪಾಸಿ ಮಾಡಿ ಆದರ್ಶಪ್ರಾಯರಾದರು.
ಈಗ ಬುದ್ದಿಜೀವಿಗಳು ಸೈಟಿಗಾಗಿ ಗಂಜಿಗಿರಾಕಿಗಳಾಗಿದ್ದಾರೆಂದು ಹೇಳಿ, ಸಮಸ್ತ ಬುದ್ದಿಜೀವಿಗಳಿಗೆ ಹೆಗಡೆ ಅವಮಾನ ಮಾಡಿದ್ದರೆ, ಎಲ್ಲಾ ಬುದ್ದಿಜೀವಿಗಳು ಒಂದಾಗಿ ಮತ್ತೆ ತಾವು ಆದರ್ಶಪ್ರಾಯರುಯೆಂಬುದು ದೇಶ ಕಣ್ಣುಕುಕ್ಕುವಂತೆ ಮಾಡಬೇಕು, ಸರ್ಕಾರದಿಂದ ಪಡೆದ ಸೈಟುಗಳ ವಾಪಾಸ್ ಮಾಡಿ, ಅನಂತ್ ತಮ್ಮ ಹೇಳಿಕೆಗೆ ಕ್ಷಮಾಪಣೆ ಕೇಳುವಂತೆ ಮಾಡಬೇಕು.
ಈ ನಾಡಿನ ಬುದ್ದಿಜೀವಿಗಳು ಸ್ವಾಭಿಮಾನಿಗಳು, ಅವರು ಬರೆಯುವ ಅಕ್ಷರವೇ ಅವರ ಅನ್ನದ ಮೂಲ, ಜನತೆ ಖರೀದಿಸುವ ಪುಸ್ತಕದಿಂದಲೇ ಅವರ ಬದುಕು ಸಾಗುತ್ತಿರುವುದು, ಹಾಗಾಗಿ ಅವರಿಗ್ಯಾವ ಮುಲಾಜು ಇಲ್ಲ, ಕೆಲವೇ ದಿನಗಳಲ್ಲಿ ,ಸೈಟ್ ವಾಪಸಿ ಮಾಡುತ್ತಾರೆ, ಈ ಹೋರಾಟಕ್ಕೆ ಸಮಸ್ತ ಕನ್ನಡಿಗರೂ ಬೆಂಬಲ ನೀಡಬೇಕಾಗಿ ವಿನಂತಿ.
#ಜೀವ_ಬಿಟ್ಟರು_ಸ್ವಾಭಿಮಾನ_ಬಿಡಬಾರದು.
ಕೃಪೆ: ವಾಟ್ಸಾಪ್
Comments
Post a Comment